ಫ್ಯಾಟಿ ಲಿವರ್ – ಕುಡಿಯದವರಿಗೂ ಬರುವ ಸೈಲೆಂಟ್ ಮಹಾಮಾರಿ! ಭಾರತದಲ್ಲಿ 40% ಜನರಿಗೆ ಇದೆ!

ಫ್ಯಾಟಿ ಲಿವರ್ ಲಕ್ಷಣಗಳು ಮತ್ತು ಕಾರಣಗಳು - Fatty Liver in Kannada - ಲಿವರ್ ಆರೋಗ್ಯ

ನಮಸ್ಕಾರ ಸ್ನೇಹಿತರೆ ನಿಮ್ಮ ಲಿವರ್ ಕಾಪಾಡಿಕೊಳ್ಳಿ! ಲಿವರ್ ಬಾಡಿಯ ಹೋಮ್ ಮಿನಿಸ್ಟರ್ ಇದ್ದಂತೆ. ಫ್ಯಾಟಿ ಲಿವರ್ (Fatty Liver) ಸಮಸ್ಯೆ ಕುಡುಕರಿಗೆ ಮಾತ್ರ ಬರುತ್ತೆ ಅಂತ ಅನ್ಕೊಂಡಿದ್ರೆ ನೀವು ಕಂಪ್ಲೀಟ್ ಆಗಿ ರಾಂಗ್! ಯಾಕಂದ್ರೆ ಇವತ್ತು ಭಾರತದಲ್ಲಿ ಫ್ಯಾಟಿ ಲಿವರ್ ಸೈಲೆಂಟ್ ಆಗಿ ಮಹಾಮಾರಿ ತರ ಹಬ್ಬುತ್ತಿದೆ. ದೇಶದ ಪ್ರತಿ 10 ಜನರಲ್ಲಿ 4 ಜನರಿಗೆ ಅಂದರೆ 40% ಜನರಿಗೆ ಫ್ಯಾಟಿ ಲಿವರ್ ಸಮಸ್ಯೆ ಇದೆ. ಇದರಲ್ಲಿ ಆಘಾತಕಾರಿ ವಿಷಯ ಏನಂದ್ರೆ, ಹೆಚ್ಚಿನವರು ಜೀವನದಲ್ಲಿ ಒಂದು ಹನಿ ಆಲ್ಕೋಹಾಲ್ ಕೂಡ ಮುಟ್ಟಿಲ್ಲ ಅಂದ್ರೂ ಬಂದಿದೆ. ಲಿವರ್ ಕಾಯಿಲೆ ಅಂದ್ರೆ ಲಿವರ್‌ಗೆ ಮಾತ್ರ ಡ್ಯಾಮೇಜ್ ಆಗಲ್ಲ, ಅದರ ಸೈಡ್ ಎಫೆಕ್ಟ್ ಆಗಿ ಡಯಾಬಿಟಿಸ್, ಹಾರ್ಟ್ ಡಿಸೀಸ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಕೂಡ ಬರಬಹುದು.

ಲಿವರ್ ಅಂದ್ರೆ ಏನು? ನಮ್ಮ ದೇಹದ ಸೂಪರ್ ಕಂಪ್ಯೂಟರ್!

ಸಾಮಾನ್ಯವಾಗಿ ಲಿವರ್ 1.5 kg ತೂಕ ಇರುತ್ತೆ, ಇದು ನಮ್ಮ ಟೋಟಲ್ ಬಾಡಿ ವೇಟ್‌ನಲ್ಲಿ 2%. ಸೈಜ್ ಮಾತ್ರ ದೊಡ್ಡದಲ್ಲ, ಮಾಡೋ ಕೆಲಸ ಕೂಡ ಸಿಕ್ಕಾಪಟ್ಟೆ ಜಾಸ್ತಿ. 500ಕ್ಕೂ ಅಧಿಕ ಕೆಲಸ ಮಾಡುತ್ತೆ ನಮ್ಮ ದೇಹದಲ್ಲಿ. ಇದನ್ನ ನಮ್ಮ ದೇಹದ ಸೂಪರ್ ಕಂಪ್ಯೂಟರ್ ಅಥವಾ ಹೋಮ್ ಮಿನಿಸ್ಟರ್ ಅನ್ನಬಹುದು.

  • ಬ್ಲಡ್ ಫಿಲ್ಟರ್: ನಮ್ಮ ಮನೆಯಲ್ಲಿ ನೀರು ಶುದ್ಧ ಮಾಡಲು ವಾಟರ್ ಫಿಲ್ಟರ್ ಇದ್ದಂತೆ, ದೇಹದ ರಕ್ತ ಶುದ್ಧ ಮಾಡಲು ಲಿವರ್ ಕೆಲಸ ಮಾಡುತ್ತೆ. ತಿಂದ ಆಹಾರ, ಕೆಮಿಕಲ್ಸ್, ಮೆಡಿಸಿನ್ಸ್, ಆಲ್ಕೋಹಾಲ್ ಎಲ್ಲವನ್ನ ಫಿಲ್ಟರ್ ಮಾಡಿ ರಕ್ತವನ್ನ ಕ್ಲೀನ್ ಮಾಡುತ್ತೆ.
  • ಡೈಜೆಶನ್: ದಿನಕ್ಕೆ ಸುಮಾರು 800 ರಿಂದ 1000 ml ಬೈಲ್ ಜ್ಯೂಸ್ ಅನ್ನ ಲಿವರ್ ಉತ್ಪಾದನೆ ಮಾಡುತ್ತೆ. ಏನೇ ತಿಂದ್ರು ಅದರಲ್ಲಿರೋ ಕೊಬ್ಬನ್ನ ಕರಗಿಸಲು ಬೈಲ್ ರಸ ಬೇಕೇ ಬೇಕು.
  • ಎನರ್ಜಿ ಬ್ಯಾಂಕ್: ದೇಹದಲ್ಲಿ ಎಕ್ಸ್ಟ್ರಾ ಇರೋ ಗ್ಲುಕೋಸ್ ನ್ನ ಸ್ಟೋರ್ ಮಾಡಿಟ್ಟುಕೊಳ್ಳುತ್ತೆ, ದಿಢೀರಂತ ಸುಸ್ತಾದಾಗ ರಿಲೀಸ್ ಮಾಡುತ್ತೆ.
  • ಬ್ಲಡ್ ಕ್ಲಾಟಿಂಗ್: ಗಾಯ ಆದಾಗ ರಕ್ತ ಸುರಿಯುವುದನ್ನು ನಿಲ್ಲಿಸಲು ಬೇಕಾದ ಫೈಬ್ರನೋಜೆನ್ ಪ್ರೋಟೀನ್ ಅನ್ನ ಲಿವರ್ ರೆಡಿ ಮಾಡಿಕೊಡುತ್ತೆ.

ಮನುಷ್ಯನ ದೇಹದಲ್ಲಿ ಕಟ್ ಮಾಡಿದ್ರೂ ಮತ್ತೆ ಬೆಳೆದುಕೊಳ್ಳುವ ಅಂಗ ಅಂದ್ರೆ ಅದು ಲಿವರ್ ಮಾತ್ರ! ಒಬ್ಬ ದಾನಿ ತನ್ನ ಲಿವರ್‌ನ 60% ಕಟ್ ಮಾಡಿ ದಾನ ಮಾಡಿದ್ರೂ, ಮೊದಲ ವಾರದಲ್ಲೇ 58% ರಿಕವರಿ ಆಗುತ್ತದೆ ಮತ್ತು 12 ವಾರಗಳಲ್ಲಿ 100% ಫಂಕ್ಷನ್ ವಾಪಸ್ ಪಡೆಯುತ್ತದೆ. ಇದೇ ಲಿವರ್‌ನ ಪವರ್!

ಕುಡಿಯದವರಿಗೂ ಫ್ಯಾಟಿ ಲಿವರ್ ಯಾಕೆ ಬರುತ್ತಿದೆ? MASLD ಅಂದ್ರೆ ಏನು?

ಲಿವರ್‌ನಲ್ಲಿ 5% ಗಿಂತ ಹೆಚ್ಚು ಫ್ಯಾಟ್ ಸ್ಟೋರ್ ಆದ್ರೆ ಅದನ್ನ ಫ್ಯಾಟಿ ಲಿವರ್ ಅಂತ ಕರೆಯುತ್ತಾರೆ. ಮೊದಲೆಲ್ಲ ಇದು ನಿತ್ಯ ಕುಡಿಯುವವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ ಒಂದು ಹನಿ ಕುಡಿಯದವರಿಗೂ ಬರುತ್ತಿದೆ. ಇತ್ತೀಚಿನ ಡೇಟಾ ಪ್ರಕಾರ ದೇಶದ 38% ಮದ್ಯಪಾನ ಮಾಡದೆ ಇರೋ ವಯಸ್ಕರಿಗೆ ಫ್ಯಾಟಿ ಲಿವರ್ ಇದೆ.

ಇದನ್ನ ಮೊದಲು NAFLD – ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಅಂತ ಕರೆಯುತ್ತಿದ್ದರು. ಆದರೆ 2023 ರಲ್ಲಿ ಮೆಡಿಕಲ್ ಜಗತ್ತು ಇದನ್ನ MASLD – ಮೆಟಬಾಲಿಕ್ ಡಿಸ್ಫಂಕ್ಷನ್ ಅಸೋಸಿಯೇಟೆಡ್ ಸ್ಟಿಯೋಟೋಟಿಕ್ ಲಿವರ್ ಡಿಸೀಸ್ ಅಂತ ರಿನೇಮ್ ಮಾಡಿದೆ. ಯಾಕಂದ್ರೆ ಇದು ಬರಿ ಫ್ಯಾಟ್ ಅಲ್ಲ, ನಮ್ಮ ಮೆಟಬಾಲಿಸಂ ಕಂಪ್ಲೀಟ್ ಆಗಿ ಹಾಳಾಗಿರೋದರ ವಾರ್ನಿಂಗ್ ಕೂಡ ಹೌದು. ಬೊಜ್ಜು, ಡಯಾಬಿಟಿಸ್ ಮತ್ತು ಮೆಟಬಾಲಿಕ್ ಡಿಸ್ಫಂಕ್ಷನ್ ಸೇರಿಕೊಂಡು ಲಿವರ್‌ನ್ನು ಹಾಳು ಮಾಡುತ್ತಿದೆ.

ಮಕ್ಕಳಿಗೂ ಬರುತ್ತಾ ಫ್ಯಾಟಿ ಲಿವರ್? ಮುಂಬೈ ಸ್ಟಡಿ ಶಾಕಿಂಗ್ ರಿಪೋರ್ಟ್!

ಇದು ಬರಿ ದೊಡ್ಡವರ ಸಮಸ್ಯೆ ಅಂದುಕೊಳ್ಳಬೇಡಿ, ಮಕ್ಕಳಿಗೂ ಅಪಾಯಕಾರಿ. ಸ್ಟಡಿ ಪ್ರಕಾರ ತೆಳ್ಳಗಿರುವ ಎಂಟರಲ್ಲಿ ಒಂದು ಮಗುವಿಗೆ ಫ್ಯಾಟಿ ಲಿವರ್ ಇದೆ, ಅದೇ ಬೊಜ್ಜಿರುವ ಮಕ್ಕಳಲ್ಲಿ ಹತ್ತರಲ್ಲಿ ಆರು ಮಕ್ಕಳಿಗೆ ಫ್ಯಾಟಿ ಲಿವರ್ ಬಂದಿದೆ. ಮುಂಬೈನ ಸ್ಕೂಲ್ ಒಂದರಲ್ಲಿ 11 ರಿಂದ 15 ವರ್ಷದ ಬೊಜ್ಜು ಇರೋ ಮಕ್ಕಳನ್ನ ಟೆಸ್ಟ್ ಮಾಡಿದಾಗ 62% ಮಕ್ಕಳಿಗೆ ಫ್ಯಾಟಿ ಲಿವರ್ ಇರುವುದು ಪತ್ತೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಸಕ್ಕರೆ!

2000-2001ನೇ ಇಸವಿಯಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 15 ಕೆಜಿ ಸಕ್ಕರೆ ತಿನ್ನುತ್ತಿದ್ದರು, ಆದರೆ 2024-25ರ ಹೊತ್ತಿಗೆ ಇದು 20 ಕೆಜಿಗೆ ಏರಿಕೆಯಾಗಿದೆ, ಅಂದರೆ 25% ಜಂಪ್! ಈ ಎಕ್ಸ್ಟ್ರಾ ಶುಗರ್ ಮತ್ತು ಜಂಕ್ ಫುಡ್ ಲಿವರ್‌ನಲ್ಲಿ ಫ್ಯಾಟ್ ಆಗಿ ಕನ್ವರ್ಟ್ ಆಗುತ್ತಿದೆ.

ಲೀನ್ ಫ್ಯಾಟಿ ಲಿವರ್ ಮತ್ತು ಲಕ್ಷಣಗಳು – ತೆಳ್ಳಗಿದ್ದರೂ ಬರುತ್ತಾ?

ಹೌದು, ಲೀನ್ MASLD ಅಂತ ಒಂದು ವಿಧ ಇದೆ. ಸಣ್ಣಗಿದ್ದರೂ ಕೂಡ ಹೊಟ್ಟೆ ಬೊಜ್ಜು ಅಥವಾ ಡಯಾಬಿಟಿಸ್ ಇದ್ದರೆ ಫ್ಯಾಟಿ ಲಿವರ್ ಬರುತ್ತೆ. ಇದು ಸೈಲೆಂಟ್ ಆಗಿ ಶುರುವಾಗುತ್ತದೆ, ಲಿವರ್ 70% ಡ್ಯಾಮೇಜ್ ಆಗುವವರೆಗೂ ಗೊತ್ತೇ ಆಗಲ್ಲ.

ಪ್ರಮುಖ ಲಕ್ಷಣಗಳು: ಹೊಟ್ಟೆ ಬೊಜ್ಜು, ವಿಪರೀತ ಸುಸ್ತು, ಪದೇಪದೇ ಸಿಹಿ ತಿನ್ನಬೇಕು ಅನಿಸುವುದು, ಏಕಾಗ್ರತೆ ಕೊರತೆ, ಹೊಟ್ಟೆಯ ಬಲಭಾಗದಲ್ಲಿ ನೋವು. ಈ ಲಕ್ಷಣಗಳು ಕಂಡರೆ ನಿರ್ಲಕ್ಷ ಮಾಡಬೇಡಿ.

ಫ್ಯಾಟಿ ಲಿವರ್ ಹೀಗೆ ಬಿಟ್ಟರೆ ಏನಾಗುತ್ತೆ? ಡೊಮಿನೋ ಎಫೆಕ್ಟ್!

ಸಿಂಪಲ್ ಫ್ಯಾಟಿ ಲಿವರ್ ಇರೋರಿಗೆ ಕಾಯಿಲೆ ಒಂದು ಸ್ಟೇಜ್ ಮುಂದಕ್ಕೆ ಹೋಗಲು 14 ವರ್ಷ ಬೇಕು. ಆದರೆ ಅದೇ ಕಾಯಿಲೆ NASH – ಲಿವರ್ ಇನ್ಫ್ಲಮೇಷನ್ ಸ್ಟೇಜ್‌ಗೆ ಹೋದರೆ ಕೇವಲ 7 ವರ್ಷಗಳಲ್ಲಿ ಲಿವರ್ ಕಂಪ್ಲೀಟ್ ಡ್ಯಾಮೇಜ್ ಆಗುತ್ತೆ. ಫ್ಯಾಟಿ ಲಿವರ್ ಇರೋರಲ್ಲಿ 20 ರಿಂದ 30% ಜನಕ್ಕೆ NASH ಬರುತ್ತೆ, ಇದರಲ್ಲಿ 10 ರಿಂದ 15% ಜನರಿಗೆ ಸಿರೋಸಿಸ್ – ಲಿವರ್ ಕಂಪ್ಲೀಟ್ ಫೇಲ್ಯೂರ್ ಆಗುವ ಹಂತಕ್ಕೆ ಹೋಗುವ ಅಪಾಯ ಇರುತ್ತದೆ.

ಲಿವರ್ ಒಮ್ಮೆ ಫೇಲ್ ಆದರೆ ಅದು ಲಿವರ್‌ಗೆ ಮಾತ್ರ ಸೀಮಿತ ಆಗಿರಲ್ಲ, ಡೊಮಿನೋ ಎಫೆಕ್ಟ್ ಕ್ರಿಯೇಟ್ ಆಗುತ್ತೆ. ಲಿವರ್ ಸರಿಯಾಗಿ ರಕ್ತವನ್ನ ಹರಿಸದೆ ಇದ್ದಾಗ ಬ್ಲಡ್ ವೆಸಲ್ಸ್ ಹಿಗ್ಗುತ್ತವೆ, ಇದರಿಂದ ಹೃದಯ ವಿಪರೀತ ವೇಗವಾಗಿ ಪಂಪ್ ಮಾಡಬೇಕಾಗುತ್ತದೆ, ಕೊನೆಗೆ ಸಿರೋಟಿಕ್ ಕಾರ್ಡಿಯೋಮಯೋಪತಿ – ಹಾರ್ಟ್ ಫೇಲ್ಯೂರ್ ರಿಸ್ಕ್ ಇರುತ್ತೆ. ಲಿವರ್ ಫಿಲ್ಟರ್ ಮಾಡದ ಅಮೋನಿಯಾದಂತ ವಿಷಕಾರಿ ಅಂಶಗಳು ಮೆದುಳಿಗೆ ಸೇರಿ ಹೆಪಾಟಿಕ್ ಎನ್ಸೆಫಲೋಪತಿ – ಬ್ರೈನ್ ಡ್ಯಾಮೇಜ್ ಶುರುವಾಗುತ್ತದೆ. ಕಿಡ್ನಿಗಳು 100% ಆರೋಗ್ಯವಾಗಿದ್ದರೂ ಲಿವರ್ ಡ್ಯಾಮೇಜ್ ಆದಾಗ ಕಿಡ್ನಿಗೂ ರಕ್ತದ ಪೂರೈಕೆ ನಿಲ್ಲುತ್ತದೆ.

ಫ್ಯಾಟಿ ಲಿವರ್ ರಿವರ್ಸ್ ಮಾಡಲು 5 ವೈಜ್ಞಾನಿಕ ದಾರಿಗಳು

ನಾವು ಇಲ್ಲಿ ಹೋಮ್ ರೆಮಿಡಿ ಹೇಳಲ್ಲ, ಪಕ್ಕಾ ಸೈಂಟಿಫಿಕ್ ಡೇಟಾ ಕೊಡುತ್ತೇವೆ:

1. ಹೈ ಪ್ರೋಟೀನ್ ಡಯಟ್: ಫ್ಯಾಟಿ ಲಿವರ್ ರಿವರ್ಸ್ ಮಾಡಲು ಹೈ ಪ್ರೋಟೀನ್ ಡಯಟ್ ಮತ್ತು ಎಕ್ಸರ್ಸೈಜ್ ತುಂಬಾ ಮುಖ್ಯ. ಇದು ಲಿವರ್ ಫ್ಯಾಟ್ ಅನ್ನ ಕರಗಿಸಲು ಹೆಲ್ಪ್ ಮಾಡುತ್ತೆ. ಇನ್ನಷ್ಟು ಹೆಲ್ತ್ ಟಿಪ್ಸ್ ಇಲ್ಲಿ ಓದಿ

2. ಸಾಕಷ್ಟು ನೀರು: ಬಾಡಿಯಲ್ಲಿರೋ ಟಾಕ್ಸಿನ್‌ಗಳನ್ನ ಫ್ಲಶ್ ಔಟ್ ಮಾಡಲು ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 3 ರಿಂದ 4 ಲೀಟರ್ ನೀರು ಕಡ್ಡಾಯ.

3. ಬ್ಲಾಕ್ ಕಾಫಿ – ಲಿವರ್‌ಗೆ ಸಂಜೀವಿನಿ: ಇದು ಇಂಟರೆಸ್ಟಿಂಗ್! 2021 ರಲ್ಲಿ UK Biobank 4.9 ಲಕ್ಷ ಜನರನ್ನ 10 ವರ್ಷ ಸ್ಟಡಿ ಮಾಡಿತು. ಇದರ ಪ್ರಕಾರ ದಿನಕ್ಕೆ 3 ಕಪ್ ಬ್ಲಾಕ್ ಕಾಫಿ ಕುಡಿಯೋರಲ್ಲಿ ಕ್ರಾನಿಕ್ ಲಿವರ್ ಕಾಯಿಲೆ ಬರುವ ರಿಸ್ಕ್ 21% ಡೌನ್ ಆಗುತ್ತೆ, ಲಿವರ್ ಕಾಯಿಲೆಯಿಂದ ಸಾಯುವ ರಿಸ್ಕ್ 49% ಕಮ್ಮಿ! ಆದರೆ ಸಕ್ಕರೆ, ದಪ್ಪ ಹಾಲು ಹಾಕಿ ಕುಡಿಯಬೇಡಿ. ಬ್ಲಾಕ್ ಕಾಫಿ ಮಾತ್ರ – ನೀರು + ಕಾಫಿ ಪುಡಿ ಅಷ್ಟೇ. ಹಾಲು ಬೇಕು ಎಂದರೆ ಫ್ಯಾಟ್ ಲೆಸ್ ಮಿಲ್ಕ್ ಯೂಸ್ ಮಾಡಿ. ಹೆಚ್ಚಿನ ಮಾಹಿತಿಗಾಗಿ NCBI ಅಧ್ಯಯನ ವರದಿ ಇಲ್ಲಿ ನೋಡಿ.

4. ವೇಟ್ ಲಿಫ್ಟಿಂಗ್ / ರೆಸಿಸ್ಟೆನ್ಸ್ ಟ್ರೈನಿಂಗ್: ಹೆಪಟಾಲಜಿ ಜರ್ನಲ್‌ನ ಸ್ಟಡಿ ಪ್ರಕಾರ ವೇಟ್ ಲಿಫ್ಟಿಂಗ್ ಮಾಡೋದ್ರಿಂದ ಲಿವರ್‌ನಲ್ಲಿರೋ ಫ್ಯಾಟ್ 25% ಕರಗುತ್ತೆ. ಬಾಡಿ ವೇಟ್ ಕಮ್ಮಿ ಆಗದಿದ್ದರೂ ಲಿವರ್ ಒಳಗಿನ ಫ್ಯಾಟ್ ಕರಗುತ್ತೆ, ಜೊತೆಗೆ ಇನ್ಸುಲಿನ್ ಸೆನ್ಸಿಟಿವಿಟಿ ಇಂಪ್ರೂವ್ ಆಗುತ್ತೆ.

5. ಕಾರ್ಡಿಯೋ: ಹೊಟ್ಟೆಯ ಬೊಜ್ಜು ಅಂದ್ರೆ ವಿಸರಲ್ ಫ್ಯಾಟ್ ಕರಗಿಸಲು ಪ್ರತಿದಿನ ಕನಿಷ್ಠ 30 ನಿಮಿಷ ಬೆವರು ಸುರಿಸುವ ವ್ಯಾಯಾಮ ಮಾಡಬೇಕು – ಜಾಗಿಂಗ್, ರನ್ನಿಂಗ್, ಬ್ರಿಸ್ಕ್ ವಾಕ್.

ಯಾವಾಗ ಡಾಕ್ಟರ್ ಹತ್ರ ಹೋಗಬೇಕು?

ಫ್ಯಾಟಿ ಲಿವರ್ ರಾತ್ರೋರಾತ್ರಿ ಬರುವ ಕಾಯಿಲೆ ಅಲ್ಲ, ದಿನೇ ದಿನೇ, ತಿಂಗಳಿಂದ ತಿಂಗಳಿಗೆ, ವರ್ಷಾನುಗಟ್ಟಲೆ ನಾವು ತಿನ್ನುವ ಜಂಕ್ ಫುಡ್, ಕುಡಿಯುವ ಶುಗರ್ ಡ್ರಿಂಕ್ಸ್ ಮತ್ತು ಸೆಡೆಂಟರಿ ಲೈಫ್‌ಸ್ಟೈಲ್‌ನಿಂದ ಬರೋದು. ಆದರೆ ಆರಂಭಿಕ ಹಂತದಲ್ಲಿ ಲೈಫ್‌ಸ್ಟೈಲ್, ಪ್ರೋಟೀನ್ ಡಯಟ್ ಮತ್ತು ವ್ಯಾಯಾಮದ ಮೂಲಕ ರಿವರ್ಸ್ ಮಾಡಬಹುದು. ನಿಮಗೆ ಸುಸ್ತು, ಹೊಟ್ಟೆ ಒಳಗಿನ ಬೊಜ್ಜು ಶೇಖರಣೆ, ಮರೆವು ಕಾಡುತ್ತಿದ್ದರೆ ನಿರ್ಲಕ್ಷ ಮಾಡಬೇಡಿ, ಕೂಡಲೇ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಅಥವಾ ವೈದ್ಯರ ಸಲಹೆ ಪಡೆಯಿರಿ. ಸೆಲ್ಫ್ ಮೆಡಿಕೇಶನ್ ಮಾಡಿಕೊಳ್ಳಬೇಡಿ.

Disclaimer: ನಾವು ಕೊಟ್ಟಿರುವುದು ಮಾಹಿತಿ ಮಾತ್ರ, ಮೆಡಿಕಲ್ ಅಡ್ವೈಸ್ ಅಲ್ಲ. ಯಾವುದೇ ಡಯಟ್ ಅಥವಾ ವ್ಯಾಯಾಮ ಶುರು ಮಾಡುವ ಮೊದಲು ತಜ್ಞ ವೈದ್ಯರನ್ನು ಭೇಟಿ ಮಾಡಿ. ಆರೋಗ್ಯವಾಗಿದ್ದೀರಾ ಅಂದುಕೊಂಡಿರುವವರು ಕೂಡ ವರ್ಷಕ್ಕೊಮ್ಮೆ ಕಂಪ್ಲೀಟ್ ಬಾಡಿ ಚೆಕಪ್ ಮಾಡಿಸಿಕೊಳ್ಳಿ.

🔥 ಟ್ಯಾಗ್‌ಗಳು:
#ಫ್ಯಾಟಿ ಲಿವರ್#Fatty Liver in Kannada#ಲಿವರ್ ಆರೋಗ್ಯ#MASLD#ಲಿವರ್ ಸಿರೋಸಿಸ್#Health Tips Kannada

Leave a Comment

Your email address will not be published. Required fields are marked *

Scroll to Top