
【entity-Bhuvneshwar Kumar¦canonical_name=Bhuvneshwar Kumar Comeback: ವಯಸ್ಸು 36 ಆಯ್ತು, ಇನ್ನು ಮುಂದೆ ಈತನಿಗೆ ಟೀಮ್ ಇಂಡಿಯಾದಲ್ಲಿ ಜಾಗವಿಲ್ಲ ಎಂದು ಬೋರ್ಡ್ ಸೆಂಟ್ರಲ್ ಕಾಂಟ್ರಾಕ್ಟ್ ನಿಂದಲೇ ಕಿತ್ತೆಸೆಯಲಾಗಿತ್ತು. ಯಾವ ನ್ಯೂಜಿಲೆಂಡ್ ಅಂಗಳದಲ್ಲಿ ಯಾವ ಆಟಗಾರನ ಕರಿಯರ್ ಮುಗಿಯಿತು ಎಂದು ಹೇಳಲಾಗಿತ್ತೋ, ಸರಿಯಾಗಿ ನಾಲ್ಕು ವರ್ಷಗಳ ನಂತರ ಅದೇ ನ್ಯೂಜಿಲೆಂಡ್ ಪ್ರವಾಸಕ್ಕೆ ಆತನ ಹೆಸರು ಬೋರ್ಡ್ ನಲ್ಲಿ ರಾರಾಜಿಸುತ್ತಿದೆ. ಹೌದು, ಭಾರತದ ಟಿ20 ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ಅದ್ಭುತ ಕಂಬ್ಯಾಕ್ ಆಗಿದೆ.
ಅಲ್ಲಿಗೆ ಕುಸಿದು ಹೋಗುತ್ತಾ ಇದ್ದ ಭಾರತದ ಬೌಲಿಂಗ್ ಬಲಕ್ಕೆ ಆನೆ ಬಲ ಬಂದಂತಾಗಿದೆ. ಸ್ವಿಂಗ್ ಕಿಂಗ್ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಆಯ್ಕೆ ಸಮಿತಿಯ ಇದೊಂದು ಬೋಲ್ಡ್ ನಿರ್ಧಾರ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಖುಷಿಯ ವಾತಾವರಣವನ್ನು ಸೃಷ್ಟಿ ಮಾಡಿದೆ.
ನವೆಂಬರ್ 2022ರಲ್ಲಿ ನ್ಯೂಜಿಲೆಂಡ್ ನಲ್ಲೇ ಕೊನೆಯ ಪಂದ್ಯ ಆಡಿದ್ದ ಭುವಿ!
ನಿಮ್ಮಲ್ಲಿ ತುಂಬಾ ಜನಕ್ಕೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ, ನವೆಂಬರ್ 2022ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲೇ ಭುವಿ ತಮ್ಮ ಕೊನೆಯ ಪಂದ್ಯವನ್ನು ಭಾರತಕ್ಕಾಗಿ ಆಡಿದ್ದರು. ಅದಾದ ನಂತರ ದಿನಗಳು ಉರುಳಿದವು, ತಿಂಗಳುಗಳು ಕಳೆದವು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಭುವನೇಶ್ವರ್ ಕುಮಾರ್ ಹೆಸರು ಟೀಮ್ ಇಂಡಿಯಾದ ರೇಡಾರ್ ನಿಂದಲೇ ಹೊರಗೆ ಬಿದ್ದುಹೋಯಿತು.
ಸಾಮಾನ್ಯವಾಗಿ ಭಾರತೀಯ ಕ್ರಿಕೆಟ್ ಸಿಸ್ಟಮ್ ನಲ್ಲಿ ಒಮ್ಮೆ ತಂಡದಿಂದ ಹೊರಬಿದ್ದರೆ ಮತ್ತೆ ಕಮ್ಬ್ಯಾಕ್ ಮಾಡುವುದು ಎವರೆಸ್ಟ್ ಏರಿದಷ್ಟೇ ಕಷ್ಟ. ಅಲ್ಲಿಗೆ ಭುವಿ ಅವರ ಕ್ರಿಕೆಟ್ ಆಟ ಮುಗಿಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಭುವಿ ಮನಸ್ಸಿನಲ್ಲಿ ಬೇರೆಯದ್ದೇ ಪ್ಲಾನ್ ಇತ್ತು. ಯಾರು ಗಮನಿಸದಿದ್ದರೂ ಮೈದಾನದಲ್ಲಿ ಬೆವರು ಹರಿಸುವುದನ್ನು ಅವರು ಒಂದು ದಿನವೂ ನಿಲ್ಲಿಸಲಿಲ್ಲ. ಪ್ರಯತ್ನ ಮಾಡುತ್ತಲೇ ಇದ್ದರು, ಈಗ ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ. Bhuvneshwar Kumar Comeback
ಹಿಂದಿನ ದಾಖಲೆಗಲ್ಲ, ಕರೆಂಟ್ ಫಾರ್ಮ್ ನೋಡಿ ಸಿಕ್ಕ ಅವಕಾಶ
ಹಾಗಂತ ಹಿಂದಿನ ರೆಕಾರ್ಡ್ ಗಳ ಆಧಾರದ ಮೇಲೆ ಈ ಅವಕಾಶ ಸಿಕ್ಕಿದ್ದಲ್ಲ, ಇತ್ತೀಚಿನ ಪ್ರದರ್ಶನಗಳನ್ನು ನೋಡಿಯೇ ಈ ಅವಕಾಶವನ್ನು ಕೊಡಲಾಗಿದೆ. ಐಪಿಎಲ್ ನಂತಹ ಟೂರ್ನಮೆಂಟ್ ನಲ್ಲಿ ಎಲ್ಲಿ ಬ್ಯಾಟರ್ ಗಳು ಪ್ರತಿ ಓವರ್ ಗೆ 10 ರನ್ ಗಳ ಸರಾಸರಿಯಲ್ಲಿ ರನ್ ಚಚ್ಚುತ್ತಿದ್ದರು, 200 ರನ್ ಗಳಿಸುವುದು ಸಣ್ಣ ವಿಷಯವಾಗಿತ್ತು, ಅಂತಹ ಕಠಿಣ ಸನ್ನಿವೇಶದಲ್ಲಿ ಭುವನೇಶ್ವರ್ ಕುಮಾರ್ ಬರೋಬ್ಬರಿ 28 ವಿಕೆಟ್ ಗಳನ್ನು ಕಬಳಿಸಿದರು, ಅದು ಸಹ ಕೇವಲ 7.95ರ ಎಕಾನಮಿ ದರದಲ್ಲಿ.
ಆಲ್ಮೋಸ್ಟ್ 8ರ ಎಕಾನಮಿಯಲ್ಲಿ 28 ವಿಕೆಟ್ ಅಂದರೆ ಅದು ಸಾಮಾನ್ಯ ಸಾಧನೆ ಅಲ್ಲ. ಅಷ್ಟೇ ಅಲ್ಲ ಸ್ನೇಹಿತರೆ, ಸಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 8 ವಿಕೆಟ್, ಯುಪಿ ಟಿ20 ಲೀಗ್ ನಲ್ಲಿ 14 ವಿಕೆಟ್ ಪಡೆದು ಬೌಲಿಂಗ್ ನಲ್ಲಿ ಬೆಂಕಿ ಹಚ್ಚಿದ್ದರು. ಇಲ್ಲಿ ಮನವಿಂದರ್ ಬಿಸ್ಲಾ ಅವರು ಒಂದು ಮಾತು ಹೇಳುತ್ತಾರೆ, ಯುಪಿ ಟಿ20 ಪಂದ್ಯ ಆಡುವ ಹಿಂದಿನ ದಿನವೂ ಭುವಿ ಅದೇ ಪ್ರಮಾಣದ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಐಪಿಎಲ್ ಪಂದ್ಯದ ಮುನ್ನ ಹೇಗೆ ಪ್ರಾಕ್ಟೀಸ್ ಮಾಡುತ್ತಿದ್ದರು ಹಾಗೆಯೇ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಭುವಿಗೆ ಪಂದ್ಯ ಚಿಕ್ಕದು ದೊಡ್ಡದು ಎಂಬುದಿಲ್ಲ, ಅವರ ದೃಷ್ಟಿಯಲ್ಲಿ ಕ್ರಿಕೆಟ್ ಅಂದರೆ ಕ್ರಿಕೆಟ್ ಅಷ್ಟೇ. ಭುವನೇಶ್ವರ್ ಕುಮಾರ್ ಅವರ ಇದೇ ಕ್ರಿಕೆಟ್ ಮೇಲಿನ ಪ್ರೀತಿ ಅವರನ್ನು ಮತ್ತೊಮ್ಮೆ ಟೀಮ್ ಇಂಡಿಯಾಗೆ ಕರೆತಂದಿದೆ.Bhuvneshwar Kumar Comeback
ಅಜಿತ್ ಅಗರ್ಕರ್ ಅನುಪಸ್ಥಿತಿಯಲ್ಲಿ ಸಿಕ್ಕ ಲಕ್ಕಿ ಚಾನ್ಸ್!
ಇಲ್ಲಿ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಇದೆ. ಅಜಿತ್ ಅಗರ್ಕರ್ ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷರು ಎಂಬುದು ನಿಮಗೆಲ್ಲ ಗೊತ್ತಿರಬಹುದು. ಆದರೆ ನ್ಯೂಜಿಲೆಂಡ್ ವಿರುದ್ಧದ ಟೀಮ್ ಸೆಲೆಕ್ಷನ್ ಟೈಮ್ ನಲ್ಲಿ ಅಜಿತ್ ಅಗರ್ಕರ್ ಇರಲೇ ಇಲ್ಲ. ಸದ್ಯಕ್ಕೆ ಬಂದಿರುವ ಸುದ್ದಿ ಪ್ರಕಾರ ಅಗರ್ಕರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಒಂದುವೇಳೆ ಅಗರ್ಕರ್ ಇದ್ದಿದ್ದರೆ ಭುವಿಗೆ ಮತ್ತೆ ಅವಕಾಶ ಸಿಗುವುದು ಡೌಟ್ ಇತ್ತು. ಏನೇ ಆದರೂ ಸದ್ಯದ ಆಯ್ಕೆ ಸಮಿತಿ ಅತ್ಯಂತ ಬೋಲ್ಡ್ ಆದ ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ಟೀಮ್ ಬೌಲಿಂಗ್ ಗೆ ರನ್ ತಡೆಯುವ ಮತ್ತು ಸ್ವಿಂಗ್ ಮಾಡುವ ನಂಬಿಕಸ್ತ ಬೌಲರ್ ಬೇಕಾಗಿದ್ದಾಗ ವಯಸ್ಸಿನ ನೆಪ ಹೇಳದೆ ಅರ್ಹತೆಗೆ ಬೆಲೆ ಕೊಟ್ಟಿದ್ದಾರೆ.Bhuvneshwar Kumar Comeback
ಭುವಿ ಹೇಳಿದ ಜೀವನ ಪಾಠ: ನಿಷ್ಕಾಮ ಕರ್ಮಯೋಗಿ
ಸ್ನೇಹಿತರೆ ಇತ್ತೀಚೆಗೆ ಭುವನೇಶ್ವರ್ ಕುಮಾರ್ ಜತಿನ್ ಸಪ್ರೂ ಅವರ ಜೊತೆಗಿನ ಸಂದರ್ಶನದಲ್ಲಿ ಒಂದು ಮಾತು ಹೇಳಿದರು, “ನನಗೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡು ರಾತ್ರಿ ನಿದ್ದೆ ಮಾಡಲು ಇಷ್ಟವಿಲ್ಲ, ಯಾಕಂದರೆ ಆ ನಿರೀಕ್ಷೆಯೇ ನಮಗೆ ನೋವು ಕೊಡುತ್ತೆ”. ಆಯ್ಕೆದಾರರ ಬೆನ್ನು ಬಿದ್ದು ಬೆಣ್ಣೆ ಹಚ್ಚಿ ಅವಕಾಶ ಪಡೆಯಲು ಭುವಿ ಎಂದಿಗೂ ಕೂಡ ಪ್ರಯತ್ನಿಸಲಿಲ್ಲ. ಅವರು ಕೇವಲ ತಮ್ಮ ಕೆಲಸದ ಮೇಲೆ ಗಮನ ಕೊಟ್ಟರು. “ನನ್ನ ಬೌಲಿಂಗ್ ಚೆನ್ನಾಗಿದ್ದರೆ ಕರೆಯುತ್ತಾರೆ, ಇಲ್ಲ ಅಂದರೆ ಇಲ್ಲ, ನಾನು ನನ್ನ ಕೆಲಸ ಮಾಡುತ್ತೇನೆ” ಅಂತ ಜೀವನಾಧಾರಿತ ಪಾಠವನ್ನು ಅವರು ನಮಗೆಲ್ಲರಿಗೂ ಕೂಡ ಕಲಿಸಿದ್ದಾರೆ. ಫಲಿತಾಂಶವನ್ನು ಅಪೇಕ್ಷಿಸದೆ ಶ್ರಮವಹಿಸುವ ವ್ಯಕ್ತಿಗೆ ಕಾಲವೇ ತಲೆಬಾಗಿ ಗೌರವ ಕೊಡುತ್ತದೆ ಎಂಬುದಕ್ಕೆ ಭುವನೇಶ್ವರ್ ಕುಮಾರ್ ಅವರ ಈ ಕಂಬ್ಯಾಕ್ ಸೂಕ್ತ ಸಾಕ್ಷಿ.Bhuvneshwar Kumar Comeback
ಭುವಿ ಕಂಬ್ಯಾಕ್ ನಿಂದ ಟೀಮ್ ಇಂಡಿಯಾಗೆ ಆಗುವ 5 ದೊಡ್ಡ ಲಾಭಗಳು
1. ಡೆತ್ ಓವರ್ ಸಮಸ್ಯೆಗೆ ಮುಕ್ತಿ: ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಭಾರತ ತಂಡದಲ್ಲಿ ಪ್ರಯೋಗಗಳ ಮೇಲೆ ಪ್ರಯೋಗಗಳು ನಡೆದವು. ಪ್ರಸಿದ್ಧ್ ಕೃಷ್ಣ ಅವರಿಂದ ಹಿಡಿದು ಹಲವು ಯುವ ಬೌಲರ್ ಗಳಿಗೆ ಅವಕಾಶ ಸಿಕ್ಕರೂ ರನ್ ನಿಯಂತ್ರಿಸುವ ಬೌಲಿಂಗ್ ದಾಳಿ ಕಟ್ಟಲು ಸಾಧ್ಯವಾಗಲಿಲ್ಲ. ಭುವಿ ಬಂದರೆ ಡೆತ್ ಓವರ್ ನಲ್ಲಿ ರನ್ ಬ್ರೇಕ್ ಹಾಕಬಹುದು.
2. ಹೊಸ ಚೆಂಡಿನಲ್ಲಿ ಸ್ವಿಂಗ್ ಮ್ಯಾಜಿಕ್: ವಿಶೇಷ ಅಂದರೆ ಅವರು ಕಮ್ಬ್ಯಾಕ್ ಮಾಡುತ್ತಿರುವುದು ತವರಿನ ಮೈದಾನದಲ್ಲಿ ಅಲ್ಲ, ನ್ಯೂಜಿಲೆಂಡ್ ನಂತಹ ಸ್ವಿಂಗ್ ಗೆ ಹೆಸರಾದ ವಾತಾವರಣದಲ್ಲಿ. ಇಲ್ಲಿ ಭುವಿ ಅವರ ದೊಡ್ಡ ಅಸ್ತ್ರ ವೇಗ ಅಲ್ಲ, ಅವರ ಲೈನ್ ಲೆಂತ್ ಮತ್ತು ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ. ಇಂದಿನ ಕ್ರಿಕೆಟ್ ನಲ್ಲಿ ಬ್ಯಾಟರ್ ಗಳು ಮೊದಲ ಓವರ್ ನಿಂದಲೇ ಅಟ್ಯಾಕ್ ಮಾಡೋದಕ್ಕೆ ಶುರು ಮಾಡುತ್ತಾರೆ, ಆದರೆ ಹೊಸ ಚೆಂಡು ಭುವಿ ಕೈಯಲ್ಲಿದ್ದರೆ ಮೊದಲ ಕೆಲ ಓವರ್ ಗಳಲ್ಲೇ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಅವರಿಗಿದೆ.
3. ಯುವ ಬೌಲರ್ ಗಳಿಗೆ ಮಾರ್ಗದರ್ಶನ: ಯುವ ಬೌಲರ್ ಗಳ ಮೇಲೆ ಒತ್ತಡ ಹೆಚ್ಚಾಗಿರುವ ಸಂದರ್ಭದಲ್ಲಿ ಭುವಿಯ ಅನುಭವ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು. ಯುವ ಬೌಲರ್ ಗಳಿಗೆ ಸಲಹೆ ನೀಡುವುದು, ಒತ್ತಡದ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು, ಬ್ಯಾಟರ್ ನ ದುರ್ಬಲತೆಯನ್ನು ಅರ್ಥ ಮಾಡಿಕೊಂಡು ಪ್ಲಾನ್ ಮಾಡುವುದು ಈ ಎಲ್ಲಾ ವಿಚಾರಗಳಲ್ಲಿ ಭುವಿಗೆ ಅಪಾರ ಅನುಭವವಿದೆ.
4. ವಯಸ್ಸು ಕೇವಲ ಸಂಖ್ಯೆ ಎಂಬ ಸಂದೇಶ: 36 ವರ್ಷದ ಭುವನೇಶ್ವರ್ ಕುಮಾರ್ ಮತ್ತು 36 ವರ್ಷದ ಮೊಹಮ್ಮದ್ ಶಮಿ ಅವರಿಬ್ಬರು ಕೇವಲ ವಯಸ್ಸಿನ ಕಾರಣಕ್ಕೆ ಹೊರಗುಳಿಯಬೇಕಾಗಿತ್ತಾ? ವಯಸ್ಸು ಅನ್ನೋದು ಕೇವಲ ಒಂದು ಸಂಖ್ಯೆ, ಕರೆಂಟ್ ಫಾರ್ಮ್, ವಿಕೆಟ್ ಪಡೆಯುವ ಸಾಮರ್ಥ್ಯ ಹಾಗೂ ಅನುಭವ ಮುಖ್ಯ ಅಲ್ವಾ?Bhuvneshwar Kumar Comeback
5. ಶಮಿಗೆ ಹೊಸ ಭರವಸೆ: ಭುವಿ ಅವರ ಈ ಆಯ್ಕೆ ಈಗ ಮತ್ತೊಬ್ಬ ದಿಗ್ಗಜ ಮೊಹಮ್ಮದ್ ಶಮಿ ಅವರಿಗೂ ಹೊಸ ಭರವಸೆ ತಂದಿದೆ. ಯಾಕಂದರೆ ಶಮಿ ಕೂಡ ರಣಜಿ ಟ್ರೋಫಿಯಲ್ಲಿ ಏಳು ಪಂದ್ಯಗಳಲ್ಲಿ 16ರ ಸರಾಸರಿಯಲ್ಲಿ 37 ವಿಕೆಟ್, ವಿಜಯ್ ಹಜಾರೆಯಲ್ಲಿ 15 ವಿಕೆಟ್ ಹಾಗೂ ಸಯದ್ ಮುಷ್ತಾಕ್ ನಲ್ಲಿ 16 ವಿಕೆಟ್ ಕಿತ್ತು ಧೂಳೆಬ್ಬಿಸಿದ್ದಾರೆ. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ಪ್ರದರ್ಶನಕ್ಕೆ ಬೆಲೆ ಸಿಗುತ್ತಾ ಇದೆ ಎಂಬ ಸ್ಪಷ್ಟ ಸಂದೇಶವನ್ನು ಈ ಸೆಲೆಕ್ಷನ್ ಸಾರಿದೆ.
ನಿಜವಾದ ಪರೀಕ್ಷೆ ಈಗಲೇ ಶುರು
ಆದರೆ ಭುವಿ ಕಮ್ಬ್ಯಾಕ್ ನ ಅಸಲಿ ಪರೀಕ್ಷೆ ಇಲ್ಲೇ ಶುರುವಾಗಿದೆ. ನಾಲ್ಕು ವರ್ಷಗಳ ಗ್ಯಾಪ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ನ ಒತ್ತಡವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ನಾಲ್ಕು ವರ್ಷಗಳ ನಂತರ ಟೀಮ್ ಇಂಡಿಯಾಗೆ ಬಂದಿರುವ ಭುವಿ ನಿಜವಾಗಿಯೂ ಹಳೆಯ ಭುವಿಯಂತೆ ಬೌಲಿಂಗ್ ಮಾಡ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವುದು ಮೈದಾನದಲ್ಲೇ. ಆದರೆ ಅನುಭವದ ವಿಚಾರದಲ್ಲಿ ಭುವಿಗಿಂತ ದೊಡ್ಡ ಆಸ್ತಿ ಈ ತಂಡಕ್ಕೆ ಸಿಗುವುದು ಕಷ್ಟ. ಒಂದುವೇಳೆ ಭುವಿ ನ್ಯೂಜಿಲೆಂಡ್ ನಲ್ಲಿ ತಮ್ಮ ಹಳೆಯ ಸ್ವಿಂಗ್ ಮ್ಯಾಜಿಕ್ ತೋರಿಸಿದರೆ ಅದು ಕೇವಲ ಒಂದು ಸರಣಿಯ ಗೆಲುವಲ್ಲ, 36 ವರ್ಷ ಅನ್ನುವ ಸಂಖ್ಯೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ದೊಡ್ಡ ಸಂದೇಶವಾಗಲಿದೆ.Bhuvneshwar Kumar Comeback
ನ್ಯೂಜಿಲೆಂಡ್ ನ ವಾತಾವರಣದಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಬೌಲಿಂಗ್ ಎದುರಾಳಿ ಬ್ಯಾಟರ್ ಗಳಿಗೆ ನರಕ ತೋರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಭುವಿ ಅವರ ಈ ಕಮ್ಬ್ಯಾಕ್ ಯಶಸ್ವಿಯಾದರೆ ಮುಂದಿನ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಕೂಡ ಭಾರತ ತಂಡದ ಜರ್ಸಿಯಲ್ಲಿ ಕಣಕ್ಕಿಳಿಯುವುದನ್ನು ನಾವು ನೋಡಬಹುದು. ಸ್ನೇಹಿತರೆ ಭುವನೇಶ್ವರ್ ಕುಮಾರ್ ಅವರು ಈಗ ವೈಯಕ್ತಿಕ ಮೈಲಿಗಲ್ಲುಗಳು, ಪರ್ಪಲ್ ಕ್ಯಾಪ್ ಗಳು ಅಥವಾ ಐದು ವಿಕೆಟ್ ಗಳ ಸಾಧನೆಗಿಂತಲೂ ಮೀರಿದ ಎತ್ತರದಲ್ಲಿದ್ದಾರೆ. “ನನ್ನ ಬೌಲಿಂಗ್ ತಂಡಕ್ಕೆ ಗೆಲುವು ತಂದುಕೊಟ್ಟರೆ ಅಷ್ಟೇ ಸಾಕು, ನಾನು ಸಂತೋಷವಾಗಿರುತ್ತೇನೆ” ಅಂತ ನಿಷ್ಕಾಮ ಕರ್ಮಯೋಗಿಯ ಮನಸ್ಥಿತಿ ಅವರದ್ದು.Bhuvneshwar Kumar Comeback
ಸ್ನೇಹಿತರೆ ಭುವನೇಶ್ವರ್ ಕುಮಾರ್ ಅವರ ಈ ಕಮ್ಬ್ಯಾಕ್ ಬಗ್ಗೆ ನಿಮಗೆ ಏನು ಅನಿಸುತ್ತದೆ? ಮುಂದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಅವರಿಗೂ ಏಕದಿನ ತಂಡದಲ್ಲಿ ಚಾನ್ಸ್ ಕೊಡಬೇಕಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.
Source: BCCI Official | Read More: Latest Sports News on Suddi Samrat
Bhuvneshwar Kumar Comeback, Bhuvi Comeback, Team India, India vs New Zealand, IPL 2026, Mohammed Shami, ಭುವನೇಶ್ವರ್ ಕುಮಾರ್
ಇನ್ನಷ್ಟು ಆರೋಗ್ಯ ಸುದ್ದಿ ಓದಿ


