ಖಾಕಿ ಧರಿಸುವ ಕನಸೇ? ಕರ್ನಾಟಕದಲ್ಲಿ 3981 ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಆರಂಭ! PUC ಆದವರಿಗೆ ಇಲ್ಲಿದೆ ಚಾನ್ಸ್

ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2026 3991 ಹುದ್ದೆಗಳು

ಕರ್ನಾಟಕ ಪೊಲೀಸ್ ಇಲಾಖೆಯಿಂದ 3981 ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ. NKK ಭಾಗದಲ್ಲಿ 3395 ಮತ್ತು KK ಭಾಗದಲ್ಲಿ 596 ಹುದ್ದೆ. ಸಂಬಳ ₹37,500 ರಿಂದ ಶುರು. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 03-07-2026. ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರ ಇಲ್ಲಿದೆ.

https://cetonline.karnataka.gov.in/kea/cpckk2026

ಬೆಂಗಳೂರು- ಕೆಲಸ ಸಿಗ್ತಿಲ್ಲ, ಸರ್ಕಾರಿ ನೌಕರಿ ಕನಸು ಅಂತ ಕೊರಗ್ತಾ ಕೂತಿದ್ದೀರಾ? ಹಾಗಿದ್ರೆ ನಿಮಗೊಂದು ಬಂಪರ್ ನ್ಯೂಸ್ ಇದೆ. ಕರ್ನಾಟಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಒಂದೇ ಸಲ 3,981 ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ. ಹೌದು, ನೀವು ಓದಿದ್ದು ಸರಿ. ಮೂರು ಸಾವಿರದ ಒಂಬೈನೂರ ಎಂಬತ್ತೊಂದು ಹುದ್ದೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇದೀಗ ಎರಡು ಪ್ರತ್ಯೇಕ ನೋಟಿಫಿಕೇಶನ್ ರಿಲೀಸ್ ಮಾಡಿದೆ. ಮೊದಲನೆಯದು ಹೈದ್ರಾಬಾದ್-ಕರ್ನಾಟಕ (NKK) ವೃಂದಕ್ಕೆ ಸಂಬಂಧಿಸಿದ್ದು, ಇದರಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪೋಸ್ಟ್‌ಗಳಿವೆ. ಎರಡನೆಯದು ಕಲ್ಯಾಣ ಕರ್ನಾಟಕ (KK) ವೃಂದಕ್ಕೆ, ಇದರಲ್ಲಿ 596 ಹುದ್ದೆಗಳಿವೆ. ಎರಡೂ ಸೇರಿ ಒಟ್ಟು 3981 ಹುದ್ದೆಗಳ ಮಹಾ ಮೇಳವೇ ಶುರುವಾಗಿದೆ.

ಯಾರು ಅರ್ಜಿ ಹಾಕಬಹುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್:

1. ವಿದ್ಯಾರ್ಹತೆ: ನೀವು ದ್ವಿತೀಯ ಪಿಯುಸಿ ಅರ್ಥಾತ್ 12ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು. CBSE, ICSE ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಬಹುದು. ಅದಷ್ಟೇ ಅಲ್ಲ, ಎರಡು ವರ್ಷದ ITI ಅಥವಾ ಮೂರು ವರ್ಷದ ಡಿಪ್ಲೊಮಾ ಮಾಡಿದವರಿಗೂ ಇದು ಗೋಲ್ಡನ್ ಚಾನ್ಸ್.

2. ಸಂಬಳ ಎಷ್ಟು ಸಿಗುತ್ತೆ?
ಸೆಲೆಕ್ಟ್ ಆದ ತಕ್ಷಣ ನಿಮಗೆ ಸಿಗೋ ಸಂಬಳ

₹37,500. ವರ್ಷಗಳು ಕಳೆದಂತೆ ಇದು ₹76,100 ವರೆಗೆ ಹೋಗುತ್ತೆ. ಸಂಬಳದ ಜೊತೆಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಭತ್ಯೆ – DA, HRA, ವೈದ್ಯಕೀಯ ಸೌಲಭ್ಯ, ಉಚಿತ ಸಮವಸ್ತ್ರ, ಕ್ಯಾಂಟೀನ್ ಸೌಲಭ್ಯ ಎಲ್ಲವೂ ಉಚಿತವಾಗಿ ಸಿಗುತ್ತೆ ಹಾಗೂ ಇತರೆ ಸೌಲಭ್ಯಗಳಿವೆ

3. ವಯಸ್ಸಿನ ಮಿತಿ:
• ಜನರಲ್ ಕೇಟಗರಿ ಹುಡುಗರಿಗೆ: 18 ರಿಂದ 33 ವರ್ಷ. • SC, ST, OBC ಹುಡುಗರಿಗೆ: 18 ರಿಂದ 35 ವರ್ಷ. • ಅರಣ್ಯ ಪ್ರದೇಶದ ನಿವಾಸಿಗಳಿಗೆ: 18 ರಿಂದ 38 ವರ್ಷದವರೆಗೆ ಅವಕಾಶ ಇದೆ. • ಈಗಾಗಲೇ ಪೊಲೀಸ್, ಹೋಮ್ ಗಾರ್ಡ್‌ನಲ್ಲಿ ಕೆಲಸ ಮಾಡ್ತಿರುವವರಿಗೆ 40 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇದೆ.
ಹುದ್ದೆಗಳ ಲೆಕ್ಕಾಚಾರ:
NKK 3395 ಹುದ್ದೆಗಳಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ಇದ್ದರೆ, ಮಹಿಳೆಯರಿಗೂ ಸುಮಾರು 1000+ ಹುದ್ದೆ ಮೀಸಲಿದೆ. KK 596 ಹುದ್ದೆಗಳಲ್ಲೂ ಅದೇ ರೀತಿ ಮೀಸಲಾತಿ ಇದೆ. ವಿಶೇಷ ಎಂದರೆ, ಈ ಬಾರಿ ತೃತೀಯ ಲಿಂಗದ ಅಭ್ಯರ್ಥಿಗಳಿಗೂ ಹುದ್ದೆ ಕಾದಿರಿಸಿರುವುದು ವಿಶೇಷ.

ಆಯ್ಕೆ ಹೇಗೆ? 4 ಸ್ಟೇಜ್ ಪ್ರೊಸೆಸ್:

1. ಮೊದಲ ಸ್ಟೇಜ್ – ಬರೆವಣಿಗೆ ಪರೀಕ್ಷೆ: 100 ಮಾರ್ಕ್ಸ್‌ನ OMR ಪರೀಕ್ಷೆ. ಜನರಲ್ ನಾಲೆಡ್ಜ್, ಕರೆಂಟ್ ಅಫೇರ್ಸ್, ಕನ್ನಡದ ಮೇಲೆ ಪ್ರಶ್ನೆ ಇರುತ್ತೆ. 2. ಎರಡನೇ ಸ್ಟೇಜ್ – ದೇಹದಾರ್ಢ್ಯತೆ ಪರೀಕ್ಷೆ: ಗಂಡುಮಕ್ಕಳಿಗೆ 1.6 ಕಿ.ಮೀ ಓಟ, ಹೆಣ್ಣುಮಕ್ಕಳಿಗೆ 400 ಮೀಟರ್ ಓಟ. ಎತ್ತರ, ತೂಕ, ಎದೆ ಅಳತೆ ಕೂಡ ಮಾಡ್ತಾರೆ. 3. ಮೂರನೇ ಸ್ಟೇಜ್ – ವೈದ್ಯಕೀಯ ತಪಾಸಣೆ: ಕಣ್ಣು, ಕಿವಿ, ಆರೋಗ್ಯ ಎಲ್ಲಾ ಸರಿ ಇದೆಯಾ ಅಂತ ಚೆಕ್ ಮಾಡ್ತಾರೆ. 4. ಕೊನೆಯ ಸ್ಟೇಜ್ – ದಾಖಲಾತಿ ಪರಿಶೀಲನೆ: ನಿಮ್ಮ ಎಲ್ಲಾ ಒರಿಜಿನಲ್ ಸರ್ಟಿಫಿಕೇಟ್ ವೆರಿಫೈ ಮಾಡ್ತಾರೆ.
ಮರೆಯಬೇಡಿ – ಈ ದಿನಾಂಕಗಳು ತುಂಬಾ ಮುಖ್ಯ:
ಅರ್ಜಿ ಹಾಕಲು ಶುರು: 8ನೇ ಜೂನ್ 2026 • ಅರ್ಜಿ ಹಾಕಲು ಕೊನೆ ದಿನ: 3ನೇ ಜುಲೈ 2026
ಒಂದೇ ಒಂದು ದಿನ ಲೇಟ್ ಆದ್ರೂ ನಿಮ್ಮ ಅರ್ಜಿ ತಗೊಳಲ್ಲ. ಸರ್ವರ್ ಸಮಸ್ಯೆ ಆಗುತ್ತೆ ಅಂತ ಕೊನೆ ದಿನ ಕಾಯಬೇಡಿ.

ಅಪ್ಲೈ ಮಾಡೋದು ಎಲ್ಲಿ?
ನಿಮ್ಮ ಮೊಬೈಲ್‌ನಲ್ಲೇ ಅರ್ಜಿ ಹಾಕಬಹುದು. KEA ಅಧಿಕೃತ ವೆಬ್‌ಸೈಟ್‌ಗೆ

https://cetonline.karnataka.gov.in/kea

ಅಧಿಕೃತ ನೋಟಿಫಿಕೇಶನ್ ಡೌನ್‌ಲೋಡ್ ಮಾಡಿ: ಅರ್ಜಿ ಸಲ್ಲಿಸಿ

ಪದೇ ಪದೇ ಕೇಳುವ ಪ್ರಶ್ನೆಗಳು –

Q1. KSP 3981 ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿ ಹಾಕಲು ಶುರು: 8ನೇ ಜೂನ್ 2026 • ಅರ್ಜಿ ಹಾಕಲು ಕೊನೆ ದಿನ: 3ನೇ ಜುಲೈ 2026

ತಡ ಮಾಡದೆ ಈಗಲೇ ಅರ್ಜಿ ಸಲ್ಲಿಸಿ.

Q2. ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಎಷ್ಟು?
ಉತ್ತರ: ಸಾಮಾನ್ಯ ವರ್ಗ: 18-33 ವರ್ಷ. SC/ST/OBC ಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇದೆ.

Q3. KSP 3981 ಸಂಬಳ ಎಷ್ಟು?
ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹,37,400 +DA+ ಇತರೆ ಭತ್ಯೆಗಳು ದೊರೆಯುತ್ತವೆ.

Q4. ಅರ್ಜಿ ಶುಲ್ಕ ಎಷ್ಟು?
ಉತ್ತರ: ಸಾಮಾನ್ಯ/OBC: ₹750, SC/ST/Cat-1: 500

ಸುದ್ದಿ ಸಾಮ್ರಾಟ್ ವಿಶ್ಲೇಷಣೆ:

ನನ್ನ 10 ವರ್ಷದ ಅನುಭವದಲ್ಲಿ ಹೇಳ್ತೀನಿ, ಇಷ್ಟು ದೊಡ್ಡ ನೇಮಕಾತಿ ಮತ್ತೆ ಬರಲ್ಲ. 3981 ಫ್ಯಾಮಿಲಿಗಳ ಬದುಕು ಬದಲಾಗುತ್ತೆ. PUC ಪಾಸಾದ ಪ್ರತಿ ಹಳ್ಳಿ ಹುಡುಗನಿಗೂ ಇದು ಚಾನ್ಸ್. ಸುಮ್ಮನೆ WhatsApp ಸ್ಟೇಟಸ್ ನೋಡ್ತಾ ಕೂರಬೇಡಿ. ಓದೋಕೆ ಶುರು ಮಾಡಿ, ದೈಹಿಕ ತಯಾರಿ ಮಾಡಿ. ಖಾಕಿ ಬಟ್ಟೆ ನಿಮ್ಮದಾಗುತ್ತೆ.

ಈ ಮಾಹಿತಿ ನಿಮ್ಮ ಒಂದು ಶೇರ್‌ನಿಂದ 10 ಜನರಿಗೆ ತಲುಪಲಿ. ಕಮೆಂಟ್‌ನಲ್ಲಿ “ಜೈ ಕರ್ನಾಟಕ” ಅಂತ ಬರೀರಿ.

Leave a Comment

Your email address will not be published. Required fields are marked *

Scroll to Top