Ration Card ತಿದ್ದುಪಡಿ 2026: ಮೇ 8 ರಿಂದ ಮತ್ತೆ ಆರಂಭ, ಇಲ್ಲಿದೆ ಕಂಪ್ಲೀಟ್ ಗೈಡ್

Ration Card ತಿದ್ದುಪಡಿ 2026 ಕರ್ನಾಟಕ, ಬೇಕಾಗುವ ದಾಖಲೆಗಳ ಲಿಸ್ಟ್, ಗ್ರಾಮ ಒನ್ ನೋಟಿಸ್

Ration Card ತಿದ್ದುಪಡಿ 2026 ಕ್ಕೆ ಕಾಯುತ್ತಿದ್ದ ಕರ್ನಾಟಕದ ಜನರಿಗೆ ಗುಡ್ ನ್ಯೂಸ್. ರಾಜ್ಯ ಸರ್ಕಾರ ಮೇ 8, 2026 ರಿಂದ Ration Card ತಿದ್ದುಪಡಿ 2026 ಪ್ರಕ್ರಿಯೆ ಮತ್ತೆ ಆರಂಭಿಸಿದೆ.

ಕಳೆದ 1 ವರ್ಷದಿಂದ ತಿದ್ದುಪಡಿ ಸ್ಥಗಿತಗೊಂಡಿತ್ತು. ಇದರಿಂದ ಲಕ್ಷಾಂತರ ಕುಟುಂಬಗಳು ಹೊಸ ಸದಸ್ಯರ ಹೆಸರು ಸೇರಿಸಲು, ತಪ್ಪು ತಿದ್ದಲು ಆಗದೆ ಪರದಾಡುತ್ತಿದ್ದವು. ಈಗ ಮತ್ತೆ ಅವಕಾಶ ಸಿಕ್ಕಿದೆ.

Ration Card ತಿದ್ದುಪಡಿ 2026: ಯಾವೆಲ್ಲ ಸೇವೆ ಸಿಗುತ್ತೆ?

ಈ ಬಾರಿ ಸರ್ಕಾರ 6 ಪ್ರಮುಖ ಸೇವೆಗಳನ್ನು ಗ್ರಾಮ ಒನ್ ಮೂಲಕ ನೀಡುತ್ತಿದೆ:

  1. ಸದಸ್ಯರ ಹೆಸರು ಸೇರ್ಪಡೆ: ಮದುವೆ ಆದವರು, ಹೊಸದಾಗಿ ಹುಟ್ಟಿದ ಮಕ್ಕಳ ಹೆಸರನ್ನು ಸೇರಿಸಬಹುದು
  2. ಮೃತಪಟ್ಟವರ ಹೆಸರು ತೆಗೆಯುವುದು: ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರು ಡಿಲೀಟ್ ಮಾಡಿಸಬಹುದು.
  3. ಹೆಸರು ತಿದ್ದುಪಡಿ: ಆಧಾರ್ ಕಾರ್ಡ್‌ನಲ್ಲಿ ಇರುವಂತೆ ಕನ್ನಡದಲ್ಲಿ ಹೆಸರು ಸರಿಪಡಿಸಬಹುದು.
  4. ವಿಳಾಸ ಬದಲಾವಣೆ: ಒಂದು ಊರಿನಿಂದ ಇನ್ನೊಂದು ಊರಿಗೆ ಶಿಫ್ಟ್ ಆಗಿದ್ರೆ ವಿಳಾಸ ಬದಲಾಯಿಸಬಹುದು.
  5. ರೇಷನ್ ಅಂಗಡಿ ಬದಲಾವಣೆ: ನಿಮ್ಮ ಮನೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಕಾರ್ಡ್ ವರ್ಗಾಯಿಸಬಹುದು.
  6. KYC ಅಪ್ಡೇಟ್: ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರ e-KYC ಮಾಡಿಸಬಹುದು.
    ಗಮನಿಸಿ: ಹೆಸರು ಸೇರ್ಪಡೆ ಮಾಡುವ ಸದಸ್ಯರ ಆಧಾರ್ ಕಾರ್ಡ್‌ನಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಹೆಸರು ಇರಬೇಕು. ಹಾಗೂ ರೇಷನ್ ಕಾರ್ಡ್‌ನಲ್ಲಿರುವ ವಿಳಾಸವೇ ಆಧಾರ್ ಕಾರ್ಡ್‌ನಲ್ಲಿ ಇರಬೇಕು. ಇಲ್ಲದಿದ್ದರೆ ಅರ್ಜಿ ರಿಜೆಕ್ಟ್ ಆಗುತ್ತೆ.
    Ration Card ತಿದ್ದುಪಡಿ 2026: ಬೇಕಾಗುವ 4 ಪ್ರಮುಖ ದಾಖಲೆಗಳು
    ಅರ್ಜಿ ಸಲ್ಲಿಸಲು ಹೋಗುವಾಗ ಈ ದಾಖಲೆಗಳನ್ನು ಒರಿಜಿನಲ್ + 1 ಝೆರಾಕ್ಸ್ ಕಾಪಿ ತೆಗೆದುಕೊಂಡು ಹೋಗಿ.

ದಾಖಲೆಗಳನ್ನು ಒರಿಜಿನಲ್ + 1 ಝೆರಾಕ್ಸ್ ಕಾಪಿ ತೆಗೆದುಕೊಂಡು ಹೋಗಿ.

ration card tiddupadi karnataka 2026

ಕ್ರ.ಸಂದಾಖಲೆ ಹೆಸರುಯಾರಿಗೆ ಬೇಕು
1ರೇಷನ್ ಕಾರ್ಡ್ಎಲ್ಲರಿಗೂ ಕಡ್ಡಾಯ
2ಆಧಾರ್ ಕಾರ್ಡ್ಸೇರ್ಪಡೆ ಆಗುವ/ತಿದ್ದುಪಡಿ ಆಗುವ ಸದಸ್ಯರಿಗೆ
3ಆದಾಯ ಪ್ರಮಾಣ ಪತ್ರBPL ಕಾರ್ಡ್‌ಗೆ ಹೊಸ ಸದಸ್ಯರ ಸೇರ್ಪಡೆಗೆ. 5 ವರ್ಷದ ಒಳಗಿನದ್ದು ಆಗಿರಬೇಕು
4ಜನನ ಪ್ರಮಾಣ ಪತ್ರ6 ವರ್ಷದ ಒಳಗಿನ ಮಕ್ಕಳ ಹೆಸರು ಸೇರಿಸಲು

6 ವರ್ಷ ಮೇಲ್ಪಟ್ಟ ಸದಸ್ಯರ ಸೇರ್ಪಡೆಗೆ ಆದಾಯ ಪ್ರಮಾಣ ಪತ್ರ ಕಡ್ಡಾಯ. ಆದಾಯ ಮಿತಿ ದಾಟಿದರೆ BPL ಕಾರ್ಡ್ APL ಆಗುವ ಸಾಧ್ಯತೆ ಇದೆ.

ಹೆಸರು ಸೇರ್ಪಡೆಗೆ ಇರುವ ವಿಶೇಷ ರೂಲ್ಸ್

ration card tiddupadi karnataka 2026

1. ಖುದ್ದು ಹಾಜರಾತಿ ಕಡ್ಡಾಯ: ತಿದ್ದುಪಡಿ ಮಾಡಿಸಲು ಈಗಾಗಲೇ ರೇಷನ್ ಕಾರ್ಡ್‌ನಲ್ಲಿ ಇರುವ ಒಬ್ಬ ಸದಸ್ಯ ಮತ್ತು ಸೇರ್ಪಡೆ ಆಗುವ ಹೊಸ ಸದಸ್ಯ ಇಬ್ಬರೂ ಗ್ರಾಮ ಒನ್ ಕೇಂದ್ರಕ್ಕೆ ಹೋಗಬೇಕು.

2. 6 ವರ್ಷದೊಳಗಿನ ಮಕ್ಕಳು: ಮಕ್ಕಳು ಬರುವುದು ಬೇಡ. ಆದರೆ ಅವರ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ತಂದೆ/ತಾಯಿ ತೆಗೆದುಕೊಂಡು ಹೋಗಬೇಕು.

3. ಮೊಬೈಲ್ ನಂಬರ್ ಲಿಂಕ್: ಆಧಾರ್‌ಗೆ ಮೊಬೈಲ್ ಲಿಂಕ್ ಆಗಿಲ್ಲ ಅಂದ್ರೆ ಮೊದಲು ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ಮಾಡಿಸಿ. ಹೆಸರು ಡಿಲೀಟ್, ವಿಳಾಸ ಬದಲಾವಣೆ ಮಾಡೋದು ಹೇಗೆ?
ಕಾರ್ಡ್‌ನಿಂದ ಯಾರಾದರೂ ಹೆಸರು ತೆಗೆಯಬೇಕು ಅಥವಾ ವಿಳಾಸ ಬದಲಾಯಿಸಬೇಕು ಅಂದ್ರೆ ಈಗಾಗಲೇ ಕಾರ್ಡ್‌ನಲ್ಲಿ ಇರುವ ಒಬ್ಬ ಸದಸ್ಯ ಹೋಗಬೇಕು. ಡಿಲೀಟ್ ಮಾಡುವ ಸದಸ್ಯರನ್ನು ಕರೆದುಕೊಂಡು ಹೋಗುವುದು ಬೇಡ.

ಬೇಕಾಗುವ ದಾಖಲೆ: ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಡಿಲೀಟ್ ಮಾಡಲು ಕಾರಣ. ಉದಾ: ಮರಣ ಪ್ರಮಾಣ ಪತ್ರ, ಮದುವೆ ಆಮಂತ್ರಣ ಪತ್ರಿಕೆ.

Ration Card ತಿದ್ದುಪಡಿ ಅರ್ಜಿ ಸಲ್ಲಿಸುವುದು ಎಲ್ಲಿ?

ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಯಾವುದೇ ಆನ್‌ಲೈನ್ ವ್ಯವಸ್ಥೆ ಇಲ್ಲ. ನೇರವಾಗಿ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ನೀಡಬೇಕು.

ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ. ration card tiddupadi karnataka 2026

ಶುಲ್ಕ: ಸರ್ಕಾರ ನಿಗದಿಪಡಿಸಿದ ಸೇವಾ ಶುಲ್ಕ ₹25 ರಿಂದ ₹50 ಇರುತ್ತೆ. ರಶೀದಿ ಪಡೆಯಲು ಮರೆಯಬೇಡಿ.


Ration Card ತಿದ್ದುಪಡಿ 2026: ಲಾಸ್ಟ್ ಡೇಟ್ ಯಾವಾಗ?
ಸದ್ಯಕ್ಕೆ ಸರ್ಕಾರ 08/05/2026 ರಿಂದ ತಿದ್ದುಪಡಿ ಆರಂಭ ಮಾಡಿದೆ. ಆದರೆ ಕೊನೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಸಾಮಾನ್ಯವಾಗಿ ಈ ರೀತಿ ಅಭಿಯಾನ 2-3 ತಿಂಗಳು ನಡೆಯುತ್ತೆ. ಆದರೆ ಸರ್ವರ್ ಸಮಸ್ಯೆ, ಜನರ ದಟ್ಟಣೆ ನೋಡಿ ಸರ್ಕಾರ ದಿನಾಂಕ ವಿಸ್ತರಣೆ ಮಾಡಬಹುದು. ಹಾಗಾಗಿ ಕೊನೆಯ ದಿನ ಕಾಯದೆ, ಬೇಗ ಅರ್ಜಿ ಸಲ್ಲಿಸುವುದು ಉತ್ತಮ.ration card tiddupadi karnataka 2026

ಗಮನಿಸಿ: ಈ ಮಾಹಿತಿಯನ್ನು ಗ್ರಾಮ ಒನ್ ಪೋಸ್ಟರ್ ಮತ್ತು ಆಹಾರ ಇಲಾಖೆಯ ಮೂಲಗಳಿಂದ ಸಂಗ್ರಹಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ahahara.kar.nic.in ವೆಬ್‌ಸೈಟ್‌ನಲ್ಲಿ ಒಂದು ಸರಿ ಖಚಿತಪಡಿಸಿಕೊಳ್ಳಿ. ಅಧಿಕೃತ ಮಾಹಿತಿಗೆ ಅದೇ ಅಂತಿಮ.

ಪದೇ ಪದೇ ಕೇಳುವ ಪ್ರಶ್ನೆಗಳು – FAQ

Q1: Ration Card ತಿದ್ದುಪಡಿ 2026 ಕ್ಕೆ ಆಧಾರ್‌ನಲ್ಲಿ ಕನ್ನಡ ಹೆಸರು ಕಡ್ಡಾಯನಾ?

A: ಹೌದು. ಸರ್ಕಾರದ ಹೊಸ ರೂಲ್ ಪ್ರಕಾರ ಆಧಾರ್ ಕಾರ್ಡ್‌ನಲ್ಲಿ ಕನ್ನಡದಲ್ಲಿ ಹೆಸರು ಇರುವುದು ಕಡ್ಡಾಯ. ಜೊತೆಗೆ ರೇಷನ್ ಕಾರ್ಡ್‌ನಲ್ಲಿರುವ ವಿಳಾಸವೇ ಆಧಾರ್ ಕಾರ್ಡ್‌ನಲ್ಲಿ ಇರಬೇಕು.

Q2: 6 ವರ್ಷದೊಳಗಿನ ಮಕ್ಕಳನ್ನು ಸೇರಿಸಲು ಏನು ಬೇಕು?

A: 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಬೇಕು. ಮಕ್ಕಳು ಖುದ್ದಾಗಿ ಕೇಂದ್ರಕ್ಕೆ ಬರುವುದು ಬೇಡ.

Q3: ತಿದ್ದುಪಡಿ ಲಾಸ್ಟ್ ಡೇಟ್ ಯಾವಾಗ? ಆನ್‌ಲೈನ್‌ನಲ್ಲಿ ಮಾಡಬಹುದಾ?

A: ಸರ್ಕಾರ 08/05/2026 ರಿಂದ ತಿದ್ದುಪಡಿ ಆರಂಭಿಸಿದೆ. ಆದರೆ ಕೊನೆಯ ದಿನಾಂಕ ಇನ್ನೂ ಪ್ರಕಟಿಸಿಲ್ಲ. ಸದ್ಯಕ್ಕೆ ಆನ್‌ಲೈನ್ ವ್ಯವಸ್ಥೆ ಇಲ್ಲ. ಗ್ರಾಮ ಒನ್ ಕೇಂದ್ರಕ್ಕೆ ಖುದ್ದಾಗಿ ಹೋಗಿ ಬಯೋಮೆಟ್ರಿಕ್ ಮೂಲಕ ಅರ್ಜಿ ಸಲ್ಲಿಸಬೇಕು

Ration Card ತಿದ್ದುಪಡಿ 2026: ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್: Ration Card ತಿದ್ದುಪಡಿ 2026 ಗೆ ಅರ್ಜಿ ಸಲ್ಲಿಸಲು ಮತ್ತು ಸ್ಟೇಟಸ್ ಚೆಕ್ ಮಾಡಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

ಇದನ್ನೂ ಓದಿ: Telegram ಬ್ಯಾನ್ ಸುದ್ದಿ ನಿಜನಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ಸಂಬಂಧಿತ ಸುದ್ದಿ: ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ ಯಾವಾಗ? ಫುಲ್ ಅಪ್‌ಡೇಟ್ ಶೀಘ್ರದಲ್ಲೇ ನಮ್ಮ ಸೈಟ್‌ನಲ್ಲಿ.

ಇದನ್ನೂ ಓದಿ:

Leave a Comment

Your email address will not be published. Required fields are marked *

Scroll to Top