
ಬೆಂಗಳೂರು, ಜೂನ್ 25: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಜೂನ್ 24, 2026 ರಂದು ಅಧಿಕೃತ ಆದೇಶ ಹೊರಡಿಸಿದೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ 13 ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಯಾಕೆ ಮಹತ್ವ?
ಪ್ರತಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ಕಾನೂನು ಸುವ್ಯವಸ್ಥೆ, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಂಪೂರ್ಣ ಹೊಣೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಇರುತ್ತದೆ. ಮಳೆಹಾನಿ, ಬರಗಾಲ ಸಂದರ್ಭದಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಕೂಡ ಇವರೇ ನೋಡಿಕೊಳ್ಳುತ್ತಾರೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ 2026 ಎಲ್ಲರಿಗೂ ಮುಖ್ಯವಾಗಿದೆ.
ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ 13 ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ.
1. ಡಾ. ಜಿ. ಪರಮೇಶ್ವರ – ಉಪ ಮುಖ್ಯಮಂತ್ರಿ – ತುಮಕೂರು ಮತ್ತು ಚಿತ್ರದುರ್ಗ
2. ಶ್ರೀ ಕೆ.ಎಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
3. ಶ್ರೀ ರಾಮಲಿಂಗರೆಡ್ಡಿ – ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
4. ಶ್ರೀ ಎಂ.ಬಿ. ಪಾಟೀಲ್ – ವಿಜಯಪುರ ಮತ್ತು ಬಾಗಲಕೋಟೆ
5. ಶ್ರೀ ಕೆ.ಜೆ. ಜಾರ್ಜ್ – ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
6. ಶ್ರೀ ಕೃಷ್ಣ ಭೈರೇಗೌಡ – ಬೆಂಗಳೂರು ನಗರ ಮತ್ತು ಹಾಸನ
7. ಶ್ರೀ ಈಶ್ವರ್ ಖಂಡ್ರೆ – ಬೀದರ್ ಮತ್ತು ಗದಗ 8. ಶ್ರೀ ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ ಮತ್ತು ಹಾವೇರಿ
9. ಶ್ರೀ ಪ್ರಿಯಾಂಕ್ ಖರ್ಗೆ – ಕಲಬುರಗಿ ಮತ್ತು ಯಾದಗಿರಿ
10. ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ – ರಾಯಚೂರು ಮತ್ತು ಕೊಪ್ಪಳ
11. ಶ್ರೀ ಯು.ಟಿ. ಖಾದರ್ ಫರೀದ್ – ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
12. ಶ್ರೀ ಬೈರತಿ ಸುರೇಶ್ – ಕೋಲಾರ ಮತ್ತು ಚಿಕ್ಕಬಳ್ಳಾಪುರ
13. ಡಾ. ಯತೀಂದ್ರ ಸಿದ್ದರಾಮಯ್ಯ – ಮೈಸೂರು ಮತ್ತು ಚಾಮರಾಜನಗರ
ಪ್ರಮುಖ ಹಂಚಿಕೆಗಳು: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ (ಪ್ರಕೃತಿ ವಿಕೋಪಕ್ಕೆ ಸಂಬಂದಿಸಿದಂತೆ )
1. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್: ತವರು ಜಿಲ್ಲೆ ತುಮಕೂರು ಜೊತೆಗೆ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ. 2. ಸಚಿವ ಪ್ರಿಯಾಂಕ್ ಖರ್ಗೆ: ತವರು ಜಿಲ್ಲೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಹೊಣೆ. 3. ಸಚಿವ ಸತೀಶ್ ಜಾರಕಿಹೊಳಿ: ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಜವಾಬ್ದಾರಿ. 4. ಸಚಿವ ಕೆ.ಎಚ್. ಮುನಿಯಪ್ಪ: ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ ಸೇರಿ 3 ಜಿಲ್ಲೆಗಳ ಉಸ್ತುವಾರಿ. 5. ಸಚಿವ ಯು.ಟಿ. ಖಾದರ್: ಕರಾವಳಿಯ ಎಲ್ಲಾ 4 ಜಿಲ್ಲೆಗಳು – ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು.
ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಏನು?
1. ಜಿಲ್ಲಾ ಮಟ್ಟದ KDP ಸಭೆ ನಡೆಸುವುದು.
2. ಬರ, ಪ್ರವಾಹ, ಮಳೆಹಾನಿ ಸಂದರ್ಭದಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ.
3. 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನೆ.
4. ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ SP, DC ಜೊತೆ ಸಭೆ.
5. ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಸಂಪೂರ್ಣ ಉಸ್ತುವಾರಿ.
ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು?
ಮೇಲಿನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ 2026 ನೋಡಿ ನಿಮ್ಮ ಜಿಲ್ಲೆಯ ಸಚಿವರು ಯಾರು ಎಂದು ತಿಳಿದುಕೊಳ್ಳಿ. ಯಾವುದೇ ಸರ್ಕಾರಿ ಕೆಲಸ, ದೂರು, ಅಹವಾಲು ಇದ್ದರೆ ನೇರವಾಗಿ ನಿಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಬಹುದು.
ಈ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ karunadu.karnataka.gov.in ಗೆ ಭೇಟಿ ನೀಡಿ
ಈ ಮಾಹಿತಿಯನ್ನು ನಿಮ್ಮ ಜಿಲ್ಲೆಯ ಎಲ್ಲಾ WhatsApp Group ಗಳಿಗೆ ಶೇರ್ ಮಾಡಿ


